Friday, December 17, 2010

ಪಕ್ಷದ ಅಂತರ!!ಅನಂತರ!! ಆಯ್ತಲ್ಲೋ ಅವಾಂತರ !!

ಖಂಡಿತವಾಗಿಯೂ ಯಾವುದೇ ಆಶ್ಚರ್ಯವಿಲ್ಲ!! ಈಗಿನ ಯುವ ಪೀಳಿಗೆ, ರಾಜಕೀಯ ಅಂದರೆ ನೂರೈವತ್ತು ಮೈಲಿ ದೂರ ಓಡಿ ಹೋಗುವ ವಿಷಯದಲ್ಲಾಗಲ್ಲಿ, its a shit ಎನ್ನುವ ಮಂದಿಯ ವಿಷಯದಲ್ಲಾಗಲ್ಲಿ, ಹಗರಣಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ನಾಚಿಕೆ ಅನ್ನುವ ಪದದ ಅರ್ಥವನ್ನು ಮರೆತು ತಿರುಗಾಡುವ ಮಂದಿಯನ್ನು ನೋಡಿ ಅಸಹ್ಯ ಪಡುವ ವಿಚಾರದಲ್ಲಗಲ್ಲಿ,.
ನಮಗೆ ಈ ಮಧ್ಯೆ ಮಾಧ್ಯಮಗಳಲ್ಲಿ ಕಾಣ ಸಿಗುವ hot ಟಾಪಿಕ್ಸ್ ಗಳು ಎಂದರೆ  , ಯಾವ ಹೀರೋ ಯಾವ ಹೀರೋಯಿನ್ ಅನ್ನು date ಮಾಡುತ್ತಿರುವ,ಅವನೆಷ್ಟು ದುಡ್ಡು ಹೊಡೆದ, ಅವನು ಯಾರ್ಯಾರ್ ಹತ್ರ ಫೋನ್ ಅಲ್ಲಿ ಏನೇನ್ ಮಾತಾಡಿದ,ಸೈಟ್ ಯಾರಿಗೆ allot ಮಾಡಿದ, ಯಾರು ಯಾವ ಕಂಪನಿಗೆ ambassador ಆದ, ಪಕ್ಷಾಂತರ, ರೆಸಾರ್ಟ್ ರಾಜಕಾರಣ ,ಸ್ಕ್ಯಾಂಡಲ್ಗಳು etc .. ಅದೇಕೋ ಏನೋ ಪಕ್ಷಾಂತರ ವಿಚಾರ  ನನ್ನ ಗಮನ ಬಹಳಾನೇ ಸೆಳೆಯಿತು..

ನಮ್ಮ ಕರ್ನಾಟಕ ನೋಡಿರುವ ಹಾಗು ನೋಡುತ್ತಿರುವ ಅತ್ಯಂತ ಕುತೂಹಲಕಾರಿ ಬೆಳವಣಿಗೆ ಅಂದರೆ ಈ  ಪಕ್ಷಾಂತರ. ಕೆಲವೊಮ್ಮೆ ಈ ಆಸಾಮಿ ಯಾವ ಪಕ್ಷದಲ್ಲಿ ಇದ್ದಾನೋ ಅಂತ ಅನುಮಾನ ಬಂದರೆ ಅಚ್ಚರಿ ಏನಿಲ್ಲ.. ಇದರ ಮೊದಲ ಪಂಕ್ತಿಯಲ್ಲಿ ಅಥವಾ ಪಕ್ಷಾಂತರ ರಾಜಕಾರಣದ leader ನಮ್ಮ ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪನವರು ಎಂದರೆ ತಪ್ಪಾಗಲಾರದು. ಸೊರಬದಲ್ಲಿರುವ ಅವರ ಅಪಾರ ಬೆಂಬಲಿಗರೇ ಅವರ ನಾಯಕ ಯಾವ ಪಾರ್ಟಿಯಲ್ಲಿ ಇದ್ದರೋ confuse ಆಗ್ತಾರೆ ಅಂತ ಕಾಣುತ್ತೆ! infact ಅವರೇ ತಾನು ಯಾವ ಪಕ್ಷದಲ್ಲಿ ಇದ್ದೇನೆಂದು ಪ್ರಶ್ನೆ ಮಾಡಿಕೊಂಡರೂ no wonder!! ಬಂಗಾರಪ್ಪ ಹಿರಿಯ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಈ ಆಸಾಮಿಯ ಸಿದ್ದಾಂತಗಳು ನನಗೆ ಇದುವರೆಗೂ decode ಮಾಡಕ್ಕೆ ಸಾಧ್ಯವಾಗಲಿಲ್ಲ..

ಇಷ್ಟಕ್ಕೂ ಜನ candidate ನ ನೋಡಿ ವೋಟು ಹಾಕ್ತಾರೋ ಇಲ್ಲ ಪಾರ್ಟಿಗೆ ನಮ್ಮ ಅಮೂಲ್ಯ ಮತ ಅಂತ ಹಾಕ್ತಾರೋ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯೇ ಸರಿ. ಒಂದು ರಾಜಕೀಯ ಪಕ್ಷ ಅಂದರೆ ಅದರದೇ ಆದ ಸಿದ್ದಾಂತ ಅಂತ ಇರುತ್ತೆ atleast ಪೇಪರ್ ಮೇಲೆ(lol).. ಒಂದು ವ್ಯಕ್ತಿ ನಾನು ಆ ಪಕ್ಷದವನು ಅಂತ badge ಲಗತ್ತಿಸಿದ ಮೇಲೆ ಆ ideals ಗೆ ಅವನು ಅಂಟುಕೊಂಡಿರಬೇಕು. ತಾನು ಎಲ್ಲಾ ನಿಯಮಗಳಿಗೂ ಬಧ್ಧನಾಗಿರಬೇಕು.ಆದರೆ ಇದೆಲ್ಲ ನಮ್ಮ ಈಗಿನ ರಾಜಕಾರಣಿಗಳಿಗೆ ಹೇಳಿ ನೋಡಿ, ನಿಮಗೆ ಕಪಾಳ ಮೋಕ್ಷ ಆದರೆ ನಾನಂತು ಜವಾಬ್ದಾರನಲ್ಲ!

ಹೌದು change ಬೇಕೆನ್ನುವುದು ಮಾನವನ ಗುಣವೇ.ಆದರೆ ತಾನು ಹುಟ್ಟು ಹಾಕಿದ ಸಿದ್ದಾಂತವನ್ನು ಕೊಲೆ ಮಾಡಿ ಬೇರೆಯದನ್ನು ಅಪ್ಪಿಕೊಂಡರೆ ನಿಮ್ಮ ಸಿದ್ದಾಂತ ನಂಬಿದ ನಿಮ್ಮ ಬೆಂಬಲಿಗರ ಪರಿಸ್ಥಿತಿ ಏನಾಗಬೇಡ ಸ್ವಾಮಿ?? ಇದಕ್ಕೆ anti secular ಪಕ್ಷಗಳಿಂದ ಬೇರೆ ಪಕ್ಷಗಳಿಗೆ ಪಲಾಯನ ಮಾಡಿರುವ ಹಾಗು ಮಾಡುವ ಎಲ್ಲಾ ನಾಯಕರು ಹಾಗು ಚಿಲ್ಲರೆ ಪಲ್ಲರೆ ರಾಜಕಾರಣಿಗಳು ಉತ್ತಮ ಉದಾಹರಣೆ. ಆ  ಪಕ್ಷದಲ್ಲಿ ಇದ್ದಾಗ ಅಲ್ಪ ಸಂಖ್ಯಾತರ ಬಗ್ಗೆ ಕ್ಯಾರೆ ಅಂತ ಕೂಡ ಅನ್ನದೆ ಹಾಗು ಅವರನ್ನು ಕಡೆಗಣಿಸಿ ಮಾತನಾಡುವ, ಬೇರೆ ಪಕ್ಷದ ವೇದಿಕೆ ಮೇಲೆ ನಾವೆಲ್ಲ ಭಾರತೀಯರು,ಅಣ್ಣ ತಮ್ಮಂದಿರು, cousinsu  ಅಂತ ಹೇಳಿದಾಗ ಆ ಮನುಷ್ಯನ ಬೆಲೆ ಏನೆಂದು ಅಳೆಯುವುದು ಕಷ್ಟದ ಕೆಲಸವೇನಲ್ಲ.

ಬಿಜೆಪಿಯಲ್ಲಿ ನೆಲೆ ಇಲ್ಲ ನಮ್ಮ ಕಾಂಗ್ರೆಸ್ಗೆ ಬನ್ನಿ ಅಂತ ನಿನ್ನೆ ಡಿಕೆಶಿ ಹೇಳಿದ್ದು ನೋಡಿದ್ರೆ ನಗು ಬರುತ್ತೆ ಗುರು..ಆಗ ಅಲ್ಲಿದ್ದವರು ಮನಸಿನಲ್ಲಿ "ನಿಮ್ಮ ಕಾಂಗ್ರೆಸ್ ಅಲ್ಲಿ ನೆಲೆ ಎಷ್ಟ್ strong ಅಂತ ಗೊತ್ತು ಬಿಡಿ ದಿಕೆಶಿಯವರೇ" ಅಂತ ಅಂದುಕೊಂಡಿರ್ತಾರೆ.. ವಾರದ ಹಿಂದೆ ತಾನೆ ಕೋಲಾರದ ಎಕ್ಸ್ mla ಶ್ರೀನಿವಾಸಗೌಡ್ರು ಮಾತು ಶ್ರೀಮಾನ್ ಬಂಗಾರಪ್ಪನವರು ಕಾಂಗ್ರೆಸ್ಗೆ  ಗುಡ್ ಬೈ ಹೇಳಿದ್ದು ಅವರು ಮರೆತ ಹಾಗಿತ್ತು ಬಿಡಿ ಪಾಪ ಏನ್ ಮಾಡೋಣ ಅವರಿಗೂ ೫೦ ದಾಟಿತು ನೋಡಿ..

ಇನ್ನು ಬಿಜೆಪಿ ವಿಚಾರಕ್ಕೆ ಬಂದದ್ದೆ ಆದರೆ, ಅಲ್ಲಿ ಪಕ್ಷವೇ ಪಕ್ಷಾಂತರ ಮಾಡಿಸುವ "team work " ಮಾಡುತ್ತೆ. ಆಪರೇಷನ್ ಕಮಲ ಎನ್ನುವ ದರಿದ್ರ ತಂತ್ರವನ್ನು ಹುಟ್ಟು ಹಾಕಿ ಏನೋ newton ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ಹಾಗೆ ಪೋಸ್ ಮಾಡ್ತಿತ್ತು. ಆದರೆ ಕೊನೆಗೆ ಎನ್ಧಿರನ್ ಚಿತ್ರದಲ್ಲಿ ರಜನಿಕಾಂತ್ ತಾನು ಕಂಡುಹಿಡಿದ ರೋಬೋಟ್ ತನಗೆ ಎದುರು ತಿರುಗುವ ಹಾಗೆ ಆಪರೇಷನ್ ಕಮಲ ಬಿಸಿ ಮುಟ್ಟಿಸಿತು.ದುಡ್ಡಿನ ಆಸೆಗಾಗಿ ಆಪರೇಷನ್ ಕಮಲದ ಬಲೆಗೆ ಬಿದ್ದವರು ತಮ್ಮ ಮಲದಲ್ಲಿ ಬಿದ್ದವರ ಥರ ಓಡಿ ಬಂದಿದ್ದು ನೋಡಿದ್ರೆ ನಗು ಬರುತ್ತೆ. ಇಷ್ಟಕ್ಕೂ ಬಿಜೆಪಿ ಅವರು ಅಟಲ್ ಬಿಹಾರಿ ವಾಜಪೇಯೀ ಅವರ ದಕ್ಷ,ನಿಷ್ಟಾವಂತ ನಾಯಕತ್ವದಿಂದ ಕಲಿತ ವಿಷಯವಾದರೂ ಏನು??

"I was keeping the best thing for the last!!" ಜೆಡಿಎಸ್  ಪಕ್ಷ ನಮ್ಮ ರಾಜ್ಯದ ಅತಿ ದೊಡ್ಡ import export ವ್ಯಾಪಾರ ಮಾಡುವ ಪಕ್ಷ. ಲಂಗು ಲಗಾಮಿಲ್ಲದೆ ಅಗೊಗಿರುವ ಪಕ್ಷ ಪಾಪ ನಮ್ಮ ಜೆಡಿಎಸ್. ಕುಮ್ಮಿ ಡೀಲ್ ಮೇಲೆ ಡೀಲ್ ಮಾಡಿ, ಪಕ್ಷ ಬಲ ಪಡಿಸಲು ಇನ್ನಿಲದ ಪ್ರಯತ್ನದಲ್ಲಿ ನಿರತರಾಗಿದ್ದಾರೆ.ಅವರ export ಲಿಸ್ಟ್ ಅಲ್ಲಿ ಅತಿ ಪ್ರಭಾವಿಗಳು ಏನಿಸುವುದು  ಸಿಧ್ಧು, ಇಬ್ರಾಹಿಮ್,ಜಿ ಟಿ ದೇವೇಗೌಡ,ಎಂ ಪಿ ಪ್ರಕಾಶ್ etc. ಇವರೆಲ್ಲ ಪಕ್ಷ ಕಟ್ಟೋಕೆ ಹರ ಸಾಹಸ ಪಟ್ಟವರು.. ಈಗ import ಸ್ಟಾರ್ಟ್ ಮಾಡಿರುವ ಜೆಡಿಎಸ್,ಶ್ರೀನಿವಾಸಗೌಡ್ರು,ಬಂಗಾರಪ್ಪನವರು ಪಕ್ಷಕ್ಕೆ ಆಹ್ವಾನಿಸಿದೆ. ಕಾದು ನೋಡೋಣ!!
ಈ ಟೈಮಿನಲ್ಲಿ ಗಾಂಧಿ,ನೆಹರು ಇದ್ದಿದ್ದರೂ, ಪಕ್ಷಾಂತರ ಮಾಡಿಸ್ಥಿದ್ರೋ ಏನೋ ??
ಅದಕ್ಕೆ caption ಪಕ್ಷದ ಅಂತರ!!ಅನಂತರ!! ಆಯ್ತಲ್ಲೋ ಅವಾಂತರ !!

ಇಂತಿ ನಿಮ್ಮ
ಅಚ್ಯುತ  ಎಂ.ಪಿ

No comments:

Post a Comment

What it takes for a 100 day WorkOut Streak !

 Those who know me know that I am a great believer of consistency. I strongly believe that with consistency anything under the sun can be ac...